The SJCE Editorial Board’s Triumph

The SJCE Editorial Board’s Triumph
ಕನ್ನಡದ ಇತಿಹಾಸ, ಕನ್ನಡದ ಅಸ್ತಿತ್ವ, ಪರಭಾಷಾ ವ್ಯಾಮೋಹ ಮುಂತಾದ ಗಂಭೀರ ವಿಷಯಗಳಿಂದ ಹಿಡಿದು, ನಗೆಹೊನಲು ಹರಿಸುವ ಕಥೆಗಳು, ನಾಟಕ ಪ್ರದರ್ಶನಗಳಿಗೆ ನಮ್ಮ ಕನ್ನಡ ಹಬ್ಬದ ವೇದಿಕೆ ಸಾಕ್ಷಿಯಾಗಿತ್ತು. ನಮ್ಮ ಕರೆಗೆ ಓಗೊಟ್ಟು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳವಾಡಿ ಮಂಜುನಾಥ್ ಹಾಗೂ ಕಲೀಮುಲ್ಲಾಹರವರಿಗೆ ಸಂಪಾದಕ ಮಂಡಳಿಯಿಂದ ಹೃದಯಪೂರ್ವಕ ಧನ್ಯವಾದಗಳು. ನಮ್ಮೊಡನೆ ಈ ಹಬ್ಬವನ್ನು ಆಚರಿಸಲು ಸೇರಿದ್ದ ಎಲ್ಲಾ ಅಧ್ಯಾಪಕರಿಗೂ, ತಮ್ಮ ಉಪಸ್ಥಿತಿಯಿಂದ ಮತ್ತಷ್ಟು ರಂಗನ್ನು ನೀಡಿದ ಎಲ್ಲರಿಗೂ ಎಸ್.ಜೆ.ಸಿ.ಇ ಸಂಪಾದಕ ಮಂಡಳಿ ವತಿಯಿಂದ ಧನ್ಯವಾದಗಳು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ನಿಧಿಶೋಧ, ವೇದಿಕೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನೆಗಳು!